ಎರಡು ರೇಖೆಗಳು - ೧೯೮೪ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ವಾಗಿದ್ದು ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದರು. ಚಂದೂಲಾಲ್ ಜೈನ್ ಇದರ ನಿರ್ಮಾಪಕರು. ಎಂ. ಎಸ್. ವಿಶ್ವನಾಥನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರದ ತಾರಾಗಣದಲ್ಲಿ ಸರಿತಾ, ಶ್ರೀನಾಥ್ ಮತ್ತು ಗೀತಾ ಪ್ರಮುಖರು.ಇದು ೧೯೬೯ ರ ತಮಿಳು ಚಿತ್ರವಾದ "ಇರು ಕೋಡುಗಳ್" ದ ರಿಮೇಕ್ ಆಗಿದೆ. ಇದರ ಕಥೆಯು ಪರಿಸ್ಥಿತಿಗಳಿಂದಾಗಿ ಇಬ್ಬರನ್ನು ಮದುವೆಯಾಗಬೇಕಾಗಿ ಬಂದ ನಾಯಕನ ಭಾವನಾತ್ಮಕ ಏಳು-ಬೀಳುಗಳ ಕುರಿತಾಗಿದೆ. ಈ ಚಿತ್ರವನ್ನು ನಂತರ ತೆಲುಗಿನಲ್ಲಿ "ಕಲೆಕ್ಟರ್ ಜಾನಕಿ " ಹೆಸರಿನಲ್ಲಿಯೂ ಹಿಂದಿಯಲ್ಲಿ "ಸಂಜೋಗ್‌ " ಹೆಸರಿನಲ್ಲಿಯೂ ಮರುನಿರ್ಮಾಣ ಮಾಡಲಾಯಿತು. == ಪಾತ್ರವರ್ಗ == ಸರಿತಾ ಶ್ರೀನಾಥ್ ಗೀತಾ ಕೆ.ಎಸ್. ಅಶ್ವಥ್ ಲೋಕನಾಥ್ ಉಮಾ ಶಿವಕುಮಾರ್ ಎನ್. ಎಸ್. ರಾವ್ ಶಿವರಾಂ ಸದಾಶಿವ ಬ್ರಹ್ಮಾವರ್ == ಹಿನ್ನೆಲೆ ಸಂಗೀತ ==